ಅಪದಾನ

ಬೌದ್ಧರ ಪಾಳಿ ತ್ರಿಪಿಟಕದಲ್ಲಿ ಸೇರಿರುವ ಬುದ್ಧ ನಿಕಾಯವೆಂಬ ಗ್ರಂಥ ಸಂಗ್ರಹದಲ್ಲೆ ಸೇರಿರುವ ಈ ಪದಕ್ಕೆ ದಿವ್ಯಚರಿತೆಯೆಂದರ್ಥ (ಅವದಾನವೆಂಬುದು ಸಂಸ್ಕøತ ರೂಪ) ಬುದ್ಧನ ಅರ್ಹತರ, ಸ್ಥವಿರ-ಸ್ಥವಿರೆಯರ ಮತ್ತು ಉಪಾಸಕರ ಲೋಕೋತ್ತರ ಚಾರಿತ್ರ್ಯವನ್ನು ಉಲ್ಲೇಖಿಸುವ ಹಲವಾರು ಪ್ರಸಂಗಗಳನ್ನು ಕಥೆಗಳನ್ನೂ ಅಪದಾನದಲ್ಲಿ ಹೆಣೆದಿದ್ದಾರೆ. ಇವುಗಳಲ್ಲಿ ಹಲವು ಜಾತಕ ಕಥೆಗಳನ್ನು ಹೋಲುವುವು. ಅಪದಾನದಲ್ಲಿ ಬುದ್ಧಾಪದಾನ, ಪಚ್ಚೇಕ ಬುದ್ಧಾಪದಾನ, ಥೇರಾ ಪದಾನ, ಥೇರಿ ಅಪರಾಧ ಎಂಬ ನಾಲ್ಕು ಪರಿಚ್ಛೇದಗಳುಂಟು; ಒಂದೊಂದು ಪರಿಚ್ಛೇದದಲ್ಲೂ ಹಲವಾರು ವಗ್ಗಗಳುಂಟು; ಒಂದೊಂದು ವಗ್ಗ ಒಂದೊಂದು ಪ್ರಸಂಗವನ್ನು ನಿರೂಪಿಸುತ್ತದೆ. ಒಟ್ಟು 547 ಪ್ರಸಂಗಗಳು ಇಲ್ಲಿ ಸೇರಿವೆ. ಗೌತಮಬುದ್ಧನಲ್ಲದೆ ಸಾರಿಪುತ್ತ, ಮೊಗ್ಗಲ್ಲಾನ, ಕಸ್ಸಪ, ಅನುರುದ್ಧ, ಉಪಾಲಿ, ಅನಂತ, ರಾಹುಲ, ರಟ್ಠಪಾಲ ಮುಂತಾದ ಸ್ಥವಿರರೂ ಪಹಾಪಜಾತೀಗೋತಮಿ, ಖೇಮಾ, ಪಟಾಚಾರಾ. ಕಿಸಗೋತಮಾ ಮುಂತಾದ ಸ್ಥವಿರೆಯರೂ ಅಪದಾನದಲ್ಲಿ ಉಲ್ಲೇಖಕ್ಕೆ ಬಂದಿದ್ದಾರೆ. ಹಲವಾರು ಪಾಳಿಅಪದಾನಗಳು ಸಂಸ್ಕøತಿ ಅವದಾನಗಳನ್ನು ಅವಲಂಬಿಸಿ ಬರೆದುವೆಂದು ತಿಳಿಯುತ್ತದೆ.						
(ಎನ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ